‘ಬ್ಯೂಟಿಫ಼ುಲ್ ಮನಸುಗಳು ಚಿತ್ರದ ಚಿತ್ರೀಕರಣ ಮುಕ್ತಾಯ
Posted date: 07 Thu, Jul 2016 – 09:47:04 AM

 ಸ್ಕಂದ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪ್ರಸನ್ನ ಮತ್ತು ಶಶಿಕಲಾಬಾಲಾಜಿ ಅವರು ನಿರ್ಮಿಸುತ್ತಿರುವ ‘ಬ್ಯೂಟಿಫ಼ುಲ್ ಮನಸುಗಳು’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಜಯತೀರ್ಥ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ನಲವತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಬಿ.ಜೆ.ಭರತ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕಿರಣ್ ಹಂಪಾಪುರ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಕಲೈ ನೃತ್ಯ ನಿರ್ದೇಶನವಿರುವ ‘ಬ್ಯೂಟಿಫ಼ುಲ್ ಮನಸುಗಳು’ ಚಿತ್ರದ ಕಾರ್ಯಕಾರಿ ನಿರ್ಮಾಪಕರು ನಾರಾಯಣ ಪಿಳ್ಳೈ.
     ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಶೃತಿ ಹರಿಹರನ್. ಅಚ್ಯುತ ಕುಮಾರ್, ತಬಲ ನಾಣಿ, ಪ್ರಶಾಂತ್ ಸಿದ್ದಿ, ಸಂದೀಪ್, ಮಂಜುನಾಥ್ ಬಿಳಿಕೆರೆ, ಮಂಜಯ್ಯ, ರಾಧಾ ಜಯರಾಂ, ಮೇಘಶ್ರೀ, ಸ್ವಾತಿ, ಚಂಚಲ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed